Friday, April 24, 2020

ಮುಂಜಾನೆ ಮಳೆ

                                            ಮುಂಜಾನೆ ಮಳೆ  

  kannadasobagu.blogspot.com               

ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುರಿದ ಮುಂಜಾನೆಯ ಮಳೆ
ತನ್ನ ಮರಗಿಡಗಳ ಸೊಂಪಾದ ಗರಿ ಬಿಚ್ಚಿ ನರ್ತಿಸಿದಳು ಇಳೆ
ಮಳೆ ನಿಂತಾಗ ಹಚ್ಚ ಹಸಿರಿನಿಂದ ಸಿಂಗಾರಗೊಂಡ ಇಳೆಗೆ ನವವಧುವಿನ ಕಳೆ
ಹಸಿರ ಸೊಬಗು ಕಂಡ ಪಕ್ಷಿಗಳು ಚಿಲಿಪಿಲಿಗುಟ್ಟಿ ಹರಿಸಿದವು ಕಲರವದ ಅಲೆ....                                                                                                                         

ಮಳೆಯಲ್ಲಿ ಮಿಂದೆದ್ದ ಭೂಮಿಗೆ ಅದಾಗಲೇ ಕಂಡಿತು ಸೂರ್ಯನ ಕಿರಣದ ಎಳೆ
ಕಿರಣಗಳು ಸೋಕಿದೊಡನೆ ಮೊಗ್ಗುಗಳೆಲ್ಲ ಹೂವಾಗಿ ಅರಳಿದವು ಒಮ್ಮೆಲೆ
ಹಸಿರು ಹಾಸಿನ ಮೇಲೆ ಹೊಳೆಯುವ ಮಳೆಹನಿಯ ಆಭರಣ ತೊಟ್ಟ ಪ್ರಕೃತಿ ನಿಜಕ್ಕೂ ಸೌಂದರ್ಯದ ಸೆಲೆ
ಅಬ್ಬಾ! ನಿಜಕ್ಕೂ ಅದ್ಭುತ! ಪ್ರಕೃತಿಯು ತನ್ನನ್ನು ತಾನು ಸಿಂಗರಿಸಿಕೊಳ್ಳುವ ಕಲೆ.
                                                                            ಅನುಪಮ ಬಿ ಜಿ

Tuesday, March 31, 2020


ಕರುನಾಡ ಹೆಮ್ಮೆ ಕಿಚ್ಚ ಸುದೀಪ
         ಚಂದನವನದ ಅವರ್ಣನೀಯ ಪ್ರತಿಭೆ ಕಿಚ್ಚ ಸುದೀಪ
        ನಿಮ್ಮಂತಹ ಅದ್ಭುತ ನಟನಿಂದ ಕನ್ನಡ ಚಿತ್ರರಂಗಕ್ಕೆ ದೊರಕಿತು ಸುಂದರವಾದ ಸ್ವರೂಪ
         ಕನ್ನಡದ ಕಂಪನ್ನು ಹೊರ ದೇಶ, ಹೊರ ರಾಜ್ಯಗಳಿಗೆ ಪಸರಿಸಿದ ಭೂಪ
         ನಿಮ್ಮ ಆದರ್ಶಗಳು ಯುವ ಪೀಳಿಗೆಗೆ ಬೆಳಕು ತೋರುವ ದೀಪ..

        ಏಳು ಬೀಳುಗಳ ಮೆಟ್ಟಿ ಇಪ್ಪತೈದು ವರ್ಷಗಳನ್ನು ಪೂರೈಸಿದ ನಿಮಗಿದೋ ನನ್ನ ಶುಭಾಶಯ
        ಸೋಲಿಗೆ ಅಂಜದೆ ಗೆದ್ದಾಗ ಬೀಗದೆ ನಿಮ್ಮದೇ ಹಾದಿಯಲ್ಲಿ ಸಾಗುತ್ತಿರುವಿರಿ ನೀವು ಮಹಾಶಯ
        ದಾದಾ ಸಾಹೇಬ್ ಫಾಲ್ಕೆ ಮುಡಿಗೇರಿಸಿಕೊಂಡು ದುಪ್ಪಟ್ಟುಗೊಳಿಸಿದಿರಿ ಕನ್ನಡಾಂಬೆಯ ಹಿರಿಮೆಯ
        ಬಿರುದು, ಗೌರವ,ಆದರಗಳೆಲ್ಲವೂ  ನಿಮ್ಮ ವ್ಯಕ್ತಿತ್ವಕ್ಕೆ ಸಂದ ನಿಜವಾದ ವಿಜಯ..

        ಇನ್ನೂ ಅತ್ಯುತ್ತಮ ಅವಕಾಶಗಳು ದೊರೆಯಲಿ ನಿಮಗೆ ಕನ್ನಡದ ಹೆಮ್ಮೆಯ ಪುತ್ರ 
         ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯಲ್ಲೂ ಬಹಳ ದೊಡ್ಡದು ನಿಮ್ಮ ಪಾತ್ರ
        ಬಹುಮುಖ ಪ್ರತಿಭೆಯ ಭಂಡಾರವಾದ ನಿಮಗೆ ನಿಮ್ಮಲ್ಲಿನ ಸರಳತೆಯೇ ನಿಮ್ಮ ಗೆಲುವಿನ ಶಸ್ತ್ರ                      ಚಿತ್ರರಂಗದಲ್ಲಿ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ನೀವು ಮುಂದೆಯೂ ಇದೇ ವ್ಯಕ್ತಿತ್ವದೊಂದಿಗೆ ಸಾಗಿ ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ ಕರುನಾಡಿನ ಸುಪುತ್ರ.                                                                                                                                                                                        ಅನುಪಮ ಬಿ ಜಿ

ಕನ್ನಡ ಸೊಬಗು ನುಡಿ


Wednesday, February 5, 2020

        ಜನುಮದಿನದ ಶುಭಾಶಯಗಳು ನನ್ನೊಲವೇ 



     ಜೀವನದ ಗೆಳೆಯಾ
     ನನ್ನೊಲವಿನ 💕 ಹೃದಯಾ 💓  
     ಇದೋ  ನಿನಗೆ ಹುಟ್ಟುಹಬ್ಬದ ಶುಭಾಶಯ 
      ನಗು ನಗುತ  ನೂರುಕಾಲ ಬಾಳು ನನ್ನಿನಿಯಾ 


   ಜೀವನವು ಸದಾ  ನಿನಗೆ ಉಣ ಬಡಿಸಲಿ  ಬೆಲ್ಲದ  ಸಿಹಿಯ 
  ಕಷ್ಟ ಕಾರ್ಪಣ್ಯಗಳು  ದೂರಾಗಿ  ಭಗವಂತ  ನಿನ್ನಿಂದ  ದೂರಸರಿಸಲಿ  ನೋವಿನ  ಕಹಿಯ                            ಸುಗಮವಾದ  ಹಾದಿಯಲ್ಲಿ  ಸಾಗಿ  ಹಾರಿಸು ನೀ ವಿಜಯ ಪತಾಕೆಯ 
  ಇದೋ ನನ್ನ ಹಾರೈಕೆ , ನೆಮ್ಮದಿ ,ಸಂತೋಷಗಳು ಒಳಹೊಕ್ಕು ಬಂಗಾರ ಮಾಡಲಿ ನಿನ್ನ ಮನಸ್ಸಿನ  ಮನೆಯ  
                                                                                                                                
                                                                                                                                        
                                                              ಅನುಪಮ ಬಿ  ಜಿ       

Friday, September 13, 2019

                                            ಜೀವನದ  ಗೌಪ್ಯತೆ 


 ಮೊದಲೇ  ತಿಳಿದವನಾರೂ  ಇಲ್ಲ ತನ್ನ  ಜೀವನವ 
ನಾ  ತಿಳಿದಿಹೆ ಎಲ್ಲವನ್ನು ಎಂದು ನುಡಿವರು ನೋಡಿ ಜ್ಯೋತಿಷ್ಯವ 
ನಿನ್ನ ಜ್ಯೋತಿಷ್ಯ ಕೆಟ್ಟದಿದ್ದರೂ  ತಲೆಕೆಡಿಸಿಕೊಳ್ಳದೆ ,ಮುನ್ನುಗು  ನಿನ್ನ ಗುರಿಯತ್ತ ನೀ ಬಿಡದೆ ಛಲವ 
ಯಾರೂ ಕೆಟ್ಟವರಿಲ್ಲ ನಂಬಿ , ತಾನು ಶ್ರದ್ದೆಯಿಂದ ಮಾಡುವ ಕಾಯಕವ


ಜೀವನದ ಪ್ರತೀ ಹಂತದಲ್ಲೂ  ಅಡಗಿದೆ ಒಂದಿಲ್ಲೊಂದು  ಗೌಪ್ಯ 
ಪ್ರತಿಯೊಬ್ಬರಿಗೂ  ಜೀವನದಿ  ಅವಕಾಶಗಳು ಲಭ್ಯ 
ಅವುಗಳ ಸರಿಯಾದ ಸಮಯಕ್ಕೆ ಗುರುತಿಸಿ ಶ್ರಮಪಟ್ಟಾಗ ನೀನಾಗುವೆ ಯೋಗ್ಯ 
ನಿನ್ನ ಗುರಿಯತ್ತ ತಲುಪಲು ತಾಳ್ಮೆ ಹಾಗೂ ಪರಿಶ್ರಮ ಅತೀ ಮುಖ್ಯ 


ಜೀವನದ ಗೌಪ್ಯತೆ ಒಮ್ಮೊಮ್ಮೆ ಸಂತಸದ ಹೂಮಳೆಗರೆಯಬಹುದು 
ಇದೇ ಜೀವನದ ಗೌಪ್ಯತೆ ಬರಸಿಡಿಲಿನಂತಹ ದುಃಖವನ್ನು ತಂದೊಯ್ಯಬಹುದು 
ಪ್ರೀತಿ ,ಶ್ರೀಮಂತಿಕೆ ಹಾಗೂ ಗೆಲುವಿನ ಸವಿಜೇನ ಉಣಿಸಬಹುದು 
ಹತಾಶೆ ,ಸೋಲು ಹಾಗೂ ಕಷ್ಟಗಳ ಹಾಲಾಹಲ ಕುಡಿಸಬಹುದು 


ಜೀವನದ ಹಾದಿಯಲ್ಲಿ ಪಯಣಿಗರು ನಾವು 
ಎಲ್ಲರಿಗೂ ಇದ್ದೇ ಇರುತ್ತದೆ ಸುಖ-ದುಃಖ  ಸಾವು ನೋವು 
ಶ್ರೀಮಂತಿಕೆಗೆ ಹಿಗ್ಗದೆ ಬಡತನಕ್ಕೆ  ಕುಗ್ಗದೆ ಸಾಗಬೇಕು ನಾವು 
ಇವೆಲ್ಲದರ ಮಿಶ್ರಣ ಸವಿದಾಗಲೇ ತಾನೇ ನಮಗೆ  ಅರಿವಾಗುವುದು ಜೀವನದ ಸ್ವಾರಸ್ಯವು                                                                                    
                                                                                                       ಅನುಪಮ ಬಿ ಜಿ  

Tuesday, June 11, 2019

ಕನ್ನಡ ಭಾಷೆ ಸಾಹಿತ್ಯ ಕ್ಷೇತ್ರಕ್ಕೇ ಒಂದು ಮೆರುಗು
ಅತ್ಯದ್ಭುತ ನಮ್ಮೀ ಕರುನಾಡಿನ ಸೃಷ್ಟಿಯ ಬೆಡಗು
ಕರುನಾಡಿನ ಸಂಪತ್ತು ಎಂತಹವರನ್ನೂ ಮಾಡುವುದು ಬೆರಗು 
ಕನ್ನಡದ ಕಂಪನ್ನು ಪಸರಿಸುವುದು ಈ ನಮ್ಮ'' ಕನ್ನಡ ಸೊಬಗು''

                                      ಅನುಪಮ ಬಿ ಜಿ 

Sunday, February 17, 2019

                    ವೀರ ಯೋಧರಿಗೆ ನಮನ 
       
         ಇದೋ , ನಿಮಗಿದು  ನಮನ,   ನಿಮಗಿದು ನಮನ
         ದೇಶದ  ಹಿತಕ್ಕಾಗಿ ಮುಡಿಪಿಟ್ಟಿರಿ ನಿಮ್ಮ ಇಡೀ  ಜೀವನ
         ಸಾರ್ಥಕವಾಯಿತು  ಭಾರತಾಂಬೆಯ  ಮಡಿಲಲ್ಲಿ  ನಿಮ್ಮ  ಜನನ
         ತ್ಯಾಗಮಯಿಗಳು ನೀವು , ನಮ್ಮ ಉಳಿವಿಗಾಗಿ  ಮಾಡಿದಿರಿ ನಿಮ್ಮ ಬಲಿದಾನ ....


         ಭಾರತಾಂಬೆಯ  ಹೆಮ್ಮೆಯ  ಸುಪುತ್ರರು  ನೀವು
         ನಮ್ಮನ್ನೆಲ್ಲ ಹೆತ್ತಮ್ಮನಂತೆ ರಕ್ಷಿಸಿ  ಹುತಾತ್ಮರಾದ  ಶೂರರು ನೀವು
         ನಿಮ್ಮ ನಿದ್ರೆ ತೊರೆದು,  ನಮಗೆ  ನಿಶ್ಚಿಂತೆ  ನಿದ್ರೆಯ  ಭಿಕ್ಷೆಯನಿತ್ತ  ಮಹಾ ಯೋಧರು ನೀವು
         ನಿಮ್ಮ ಸುಖವನ್ನೆಲ್ಲಾ ಕೊಂದುಕೊಂಡು,  ನಮ್ಮ ಸುಖ ಸಂತೋಷಕ್ಕಾಗಿ  ನಿಮ್ಮನ್ನು ಪಣಕ್ಕಿಟ್ಟ  ನಿಸ್ವಾರ್ಥಿಗಳು ನೀವು ............

           
         ನಮ್ಮ  ಜೀವನಕ್ಕೆ  ಆಕಾರಕೊಟ್ಟ  ನಿಮ್ಮ  ದೇಹವನ್ನು  ಶತ್ರುಗಳು  ಛಿದ್ರ  ಛಿದ್ರಗೊಳಿಸಿದರು.
         ನಮ್ಮ ದೇಶದ  ಪ್ರತಿಬಿಂಬವಾದ  ನಿಮ್ಮ ಬಿಂಬವ ಕೊನೆಯಬಾರಿ  ನಿಮ್ಮ ಮನೆಯವರೇ ನೋಡದಂತೆ
                                                      ಮಾಡಿದರು.
     ಆ  ದುಷ್ಟರು  ಭಾರತಾಂಬೆಯ  ಪಾದಗಳಿಗೆ  ನಿಮ್ಮ  ನೆತ್ತರಿನ  ಹೊಳೆಯನ್ನೇ   ಹರಿಸಿದರು.
   ನಿಮ್ಮ ದೇಹವನ್ನು  ಮಾಂಸದ ತುಂಡುಗಳಾಗಿಸಿದವರ ವಿರುದ್ಧ ಪ್ರತೀಕಾರ   ತೆಗೆದುಕೊಂಡೇ   ತೀರುವರು
          ನಿಮ್ಮ ಸ್ನೇಹಿತರಾದ ನಮ್ಮ ಭಾರತ ಯೋಧರು .......



        ನಿಮ್ಮಂತಹ ವೀರಪುತ್ರರನ್ನು  ಹೆತ್ತು ,  ಭಾರತಾಂಬೆಯ  ಸೇವೆಗೆ ಅರ್ಪಿಸಿದ ಆ ಹೆತ್ತ ಕರುಳುಗಳಿಗೆ
                                                         ನನ್ನ ನಮನ.
        ತಮ್ಮ ಪ್ರೀತಿಯನ್ನೆಲ್ಲ ಮನಸೊಳಗೆ ಅದುಮಿಟ್ಟು ದೇಶ ಸೇವೆಗೆ  ಕಳುಹಿಸಿಕೊಟ್ಟ ಪ್ರತಿಯೊಬ್ಬ ಯೋಧನ ಬಾಳಸಂಗಾತಿಗೆ ಮನದಾಳದ  ನಮನ.
        ಇಡೀ ದೇಶ ಅಂದು ಪ್ರೇಮದ ಅಮಲಿನಲ್ಲಿ ,  ನೀವಿದ್ದಿರಿ ಅಂದು ರಕ್ತದ ಮಡುವಿನಲ್ಲಿ ನಿಮ್ಮೀ  ತ್ಯಾಗಕ್ಕೆ
                                                          ನನ್ನ ನಮನ.
        ನಿಮ್ಮ ದೇಶ ಸೇವೆಗೆ , ನನ್ನ ವಂದನಾರ್ಪಣೆ  ಸಾಸಿವೆಕಾಳಷ್ಟೂ ಅಲ್ಲ ,ಆದರೂ ಸಮರ್ಪಿಸಿರುವೆ
                  ನಿಮಗಾಗಿ ಇದೋ ಈ ಪುಟ್ಟ ಕವನ ............                                                                                                                             

                                                                                                      ಅನುಪಮ ಬಿ ಜಿ
       
          

Tuesday, February 5, 2019

Kannada Sobagu (ಕನ್ನಡ ಸೊಬಗು):                                     ನನ್ನೊಲವಿನ ಹೃದಯ...

Kannada Sobagu (Kannada elegance): Heart of myola ...: My heart's heart is greeting my heart's heart is the birthday of you ... This is my part ...

                                    ನನ್ನೊಲವಿನ ಹೃದಯಕೆ ಶುಭಾಶಯ



   ನನ್ನೊಲವಿನ ಹೃದಯವೇ ನಿನಗಿಂದು ಹುಟ್ಟು ಹಬ್ಬದ ಶುಭದಿನ...

   ನನ್ನಯ ಪಾಲಿಗೆ ಇದು ಮಹತ್ವದ ಸುದಿನ...

   ನಿನ್ನನ್ನು ನನ್ನ ಜೀವನಕ್ಕೆ ಕಾಣಿಕೆಯಾಗಿತ್ತ ದೇವರಿಗೊಂದು ನಮನ..

   ನಿನ್ನ ಅಪಾರವಾದ ಪ್ರೇಮಕ್ಕೆ ಏನ ತಾನೇ ನೀಡಲಿ ನಾ ಬಹುಮಾನ...




   ಇದೋ ನನ್ನ ಮನದಾಳದ ಹಾರೈಕೆ ನಿನಗೆ ನಲ್ಲ ,

   ಜೀವನದ ಪ್ರತಿಯೊಂದು ಕ್ಷಣವೂ ನಿನಗಾಗಲಿ ಸವಿಯಾದ ಬೆಲ್ಲ...

   ಕಷ್ಟ ಕಾರ್ಪಣ್ಯಗಳು ಸರಿಯಲಿ ದೂರ, ನಿನ್ನಿಂದ  ನಲ್ಲ...

   ಇಂದೇ ಮರೆಯಾಗಿ ಹೋಗಲಿ ನಿನ್ನ ಜೀವನದ  ಕಹಿಯಾದ  ಕ್ಷಣಗಳೆಲ್ಲ...




   ನಿನ್ನ ಜೀವದ ಗೆಳತಿ ನಾ, ಸದಾ ಸಿದ್ದಳು , ಪಾಲುದಾರಿಕೆಗೆ , ನಿನ್ನ ನೋವು ನಲಿವುಗಳಲಿ....

   ನೀನೆಂದೂ ಮುಳುಗದಿರು ದುಃಖದ ಮಡುವಿನಲಿ , ಆ ದುಗುಡದ ಕ್ಷಣಗಳೆಲ್ಲವೂ ನನಗಿರಲಿ...

   ಕಗ್ಗತ್ತಲ ಅಂಧಕಾರ ಎಂದೂ ನಿನ್ನ ಆವರಿಸದಿರಲಿ ,ಅಂಧಕಾರವ ಬಡಿದೋಡಿಸಿ ಜೀವನದಿ ಸೆಣಸಾಡುವ ಶಕ್ತಿ ನಿನಗೆ ಸಿಗಲಿ
   
   ನಿನ್ನ ಜೀವನದ ಬಂಡಿ ಸದಾ ಸಾಗಲಿ ಹೊನ್ನ ಬೆಳಕಲಿ.....





   ನೀನೊಂದು ಪ್ರೀತಿ,  ಪ್ರೇಮ ,ಸಹನೆಗಳ  ಆಗರ...

   ನಿನ್ನ ಜೀವನದ ಸಂಗಾತಿಯಾಗಿ ನಿಜಕ್ಕೂ ನನ್ನ ಬಾಳಾಯಿತು ಬಂಗಾರ...

   ಇಂದಿನ ಶುಭಗಳಿಗೆಯಲ್ಲಿ , ನಿನಗೆ ಭಗವಂತನ ಆಶೀರ್ವಾದದ ಸುರಿಮಳೆಯಾಗಲಿ ಅಪಾರ...

   ನಿನ್ನ ಜನುಮದಿನಕೆ ಇದೋ ನನ್ನ ಪುಟ್ಟ ಕವನದ ಕಾಣಿಕೆ ನಿನಗೆ,  ನನ್ನ ಮನದ ಪಾಳೇಗಾರ.....


                                                                                         ಅನುಪಮ ಬಿ. ಜಿ. ಪ್ರಸಾದ್

Monday, January 21, 2019

                                                                       ನಡೆದಾಡುವ  ದೇವರು
   
   ವೀರಾಪುರದಲ್ಲಿ  ಜನಿಸಿದ  ಕನ್ನಡಾಂಬೆಯ ವೀರ  ಪುತ್ರ ,
   ತಮ್ಮ ಇಹಲೋಕದ  ಕಾಯಕವ  ಪೂರೈಸಿ  ದೇವರ  ಬಳಿಗೆ  ತೆರಳಿದ  ಶಿವನ  ಸುಪುತ್ರ ....
   ತ್ರಿವಿಧ  ದಾಸೋಹಿಯಾಗಿ  ಭಕ್ತರ  ಪಾಲಿಗೆ  ಪರಮಾತ್ಮನಾದ  ' ಕರ್ನಾಟಕ ರತ್ನ' ,
   ನೊಂದಿಹೆವು  ನಾವು  ಬಹಳ , ರತ್ನದಂತಹ  ನಿಮಗೆ  ತಲುಪಲಿಲ್ಲ  ' ಭಾರತ ರತ್ನ' .....

   ಸದಾಕಾಲ  ಇತರರ  ಬಾಳಿಗೆ  ಬೆಳಕಾಗಲೆಂದು  ಮೇಣದಂತೆ  ಉರಿದ  ತ್ಯಾಗಮಯಿ
   ಹಸಿದವರ  ಪಾಲಿಗೆ  ಅಮೃತವನ್ನಿತ್ತ  ಸಹೃದಯಿ
    ಜ್ಞಾನದ  ಹಸಿವನ್ನು  ನೀಗಿಸಿದ  ಮಹಾನ್  ಕರುಣಾಮಯಿ
   ನಿಮ್ಮನ್ನು  ಕಳೆದುಕೊಂಡ  ಈ  ನಾಡು , ಇಂದು  ನಿಜಕ್ಕೂ   ಬಡಪಾಯಿ......

   ಸಿದ್ಧಗಂಗಾ  ಕ್ಷೇತ್ರವನ್ನೇ  ಸ್ವರ್ಗದಂತೆ  ಮಾರ್ಪಡಿಸಿದ ಶಿವನ  ಕುಮಾರ...
   ಭಕ್ತರ  ಹೃದಯದಲ್ಲಿ   ಸದಾ  ಕಾಲ  ನೀವು  ಅಮರ.......
   ಸರ್ವರಿಗೂ  ಸನ್ಮಾರ್ಗ   ತೋರಿ  , ತುಂಬು  ಜೀವನ  ನಡೆಸಿದ  ಮಹಾನ್  ಚೇತನ ,
   ನಡೆದಾಡುವ  ದೇವರಾಗಿ  ನಡೆಸಿದಿರಿ  ನೀವು ,  ಸಾರ್ಥಕತೆಯ  ಜೀವನ .............


                                                                                 ಅನುಪಮ ಬಿ ಜಿ

#guru #teacher #sculptor #knowledge