ವೀರ ಯೋಧರಿಗೆ ನಮನ
ಇದೋ , ನಿಮಗಿದು ನಮನ, ನಿಮಗಿದು ನಮನ
ದೇಶದ ಹಿತಕ್ಕಾಗಿ ಮುಡಿಪಿಟ್ಟಿರಿ ನಿಮ್ಮ ಇಡೀ ಜೀವನ
ಸಾರ್ಥಕವಾಯಿತು ಭಾರತಾಂಬೆಯ ಮಡಿಲಲ್ಲಿ ನಿಮ್ಮ ಜನನ
ತ್ಯಾಗಮಯಿಗಳು ನೀವು , ನಮ್ಮ ಉಳಿವಿಗಾಗಿ ಮಾಡಿದಿರಿ ನಿಮ್ಮ ಬಲಿದಾನ ....
ಭಾರತಾಂಬೆಯ ಹೆಮ್ಮೆಯ ಸುಪುತ್ರರು ನೀವು
ನಮ್ಮನ್ನೆಲ್ಲ ಹೆತ್ತಮ್ಮನಂತೆ ರಕ್ಷಿಸಿ ಹುತಾತ್ಮರಾದ ಶೂರರು ನೀವು
ನಿಮ್ಮ ನಿದ್ರೆ ತೊರೆದು, ನಮಗೆ ನಿಶ್ಚಿಂತೆ ನಿದ್ರೆಯ ಭಿಕ್ಷೆಯನಿತ್ತ ಮಹಾ ಯೋಧರು ನೀವು
ನಿಮ್ಮ ಸುಖವನ್ನೆಲ್ಲಾ ಕೊಂದುಕೊಂಡು, ನಮ್ಮ ಸುಖ ಸಂತೋಷಕ್ಕಾಗಿ ನಿಮ್ಮನ್ನು ಪಣಕ್ಕಿಟ್ಟ ನಿಸ್ವಾರ್ಥಿಗಳು ನೀವು ............
ನಮ್ಮ ಜೀವನಕ್ಕೆ ಆಕಾರಕೊಟ್ಟ ನಿಮ್ಮ ದೇಹವನ್ನು ಶತ್ರುಗಳು ಛಿದ್ರ ಛಿದ್ರಗೊಳಿಸಿದರು.
ನಮ್ಮ ದೇಶದ ಪ್ರತಿಬಿಂಬವಾದ ನಿಮ್ಮ ಬಿಂಬವ ಕೊನೆಯಬಾರಿ ನಿಮ್ಮ ಮನೆಯವರೇ ನೋಡದಂತೆ
ಮಾಡಿದರು.
ಆ ದುಷ್ಟರು ಭಾರತಾಂಬೆಯ ಪಾದಗಳಿಗೆ ನಿಮ್ಮ ನೆತ್ತರಿನ ಹೊಳೆಯನ್ನೇ ಹರಿಸಿದರು.
ನಿಮ್ಮ ದೇಹವನ್ನು ಮಾಂಸದ ತುಂಡುಗಳಾಗಿಸಿದವರ ವಿರುದ್ಧ ಪ್ರತೀಕಾರ ತೆಗೆದುಕೊಂಡೇ ತೀರುವರು
ನಿಮ್ಮ ಸ್ನೇಹಿತರಾದ ನಮ್ಮ ಭಾರತ ಯೋಧರು .......
ನಿಮ್ಮಂತಹ ವೀರಪುತ್ರರನ್ನು ಹೆತ್ತು , ಭಾರತಾಂಬೆಯ ಸೇವೆಗೆ ಅರ್ಪಿಸಿದ ಆ ಹೆತ್ತ ಕರುಳುಗಳಿಗೆ
ನನ್ನ ನಮನ.
ತಮ್ಮ ಪ್ರೀತಿಯನ್ನೆಲ್ಲ ಮನಸೊಳಗೆ ಅದುಮಿಟ್ಟು ದೇಶ ಸೇವೆಗೆ ಕಳುಹಿಸಿಕೊಟ್ಟ ಪ್ರತಿಯೊಬ್ಬ ಯೋಧನ ಬಾಳಸಂಗಾತಿಗೆ ಮನದಾಳದ ನಮನ.
ಇಡೀ ದೇಶ ಅಂದು ಪ್ರೇಮದ ಅಮಲಿನಲ್ಲಿ , ನೀವಿದ್ದಿರಿ ಅಂದು ರಕ್ತದ ಮಡುವಿನಲ್ಲಿ ನಿಮ್ಮೀ ತ್ಯಾಗಕ್ಕೆ
ನನ್ನ ನಮನ.
ನಿಮ್ಮ ದೇಶ ಸೇವೆಗೆ , ನನ್ನ ವಂದನಾರ್ಪಣೆ ಸಾಸಿವೆಕಾಳಷ್ಟೂ ಅಲ್ಲ ,ಆದರೂ ಸಮರ್ಪಿಸಿರುವೆ
ನಿಮಗಾಗಿ ಇದೋ ಈ ಪುಟ್ಟ ಕವನ ............
ಅನುಪಮ ಬಿ ಜಿ

No comments:
Post a Comment