ಕರುನಾಡ ಹೆಮ್ಮೆ ಕಿಚ್ಚ ಸುದೀಪ
ಚಂದನವನದ ಅವರ್ಣನೀಯ ಪ್ರತಿಭೆ ಕಿಚ್ಚ ಸುದೀಪ
ನಿಮ್ಮಂತಹ ಅದ್ಭುತ ನಟನಿಂದ ಕನ್ನಡ ಚಿತ್ರರಂಗಕ್ಕೆ ದೊರಕಿತು ಸುಂದರವಾದ ಸ್ವರೂಪ
ಕನ್ನಡದ ಕಂಪನ್ನು ಹೊರ ದೇಶ, ಹೊರ ರಾಜ್ಯಗಳಿಗೆ ಪಸರಿಸಿದ ಭೂಪ
ನಿಮ್ಮ ಆದರ್ಶಗಳು ಯುವ ಪೀಳಿಗೆಗೆ ಬೆಳಕು ತೋರುವ ದೀಪ..
ಏಳು ಬೀಳುಗಳ ಮೆಟ್ಟಿ ಇಪ್ಪತೈದು ವರ್ಷಗಳನ್ನು ಪೂರೈಸಿದ ನಿಮಗಿದೋ ನನ್ನ ಶುಭಾಶಯ
ಸೋಲಿಗೆ ಅಂಜದೆ ಗೆದ್ದಾಗ ಬೀಗದೆ ನಿಮ್ಮದೇ ಹಾದಿಯಲ್ಲಿ ಸಾಗುತ್ತಿರುವಿರಿ ನೀವು ಮಹಾಶಯ
ದಾದಾ ಸಾಹೇಬ್ ಫಾಲ್ಕೆ ಮುಡಿಗೇರಿಸಿಕೊಂಡು ದುಪ್ಪಟ್ಟುಗೊಳಿಸಿದಿರಿ ಕನ್ನಡಾಂಬೆಯ ಹಿರಿಮೆಯ
ಈ ಬಿರುದು, ಗೌರವ,ಆದರಗಳೆಲ್ಲವೂ ನಿಮ್ಮ ವ್ಯಕ್ತಿತ್ವಕ್ಕೆ ಸಂದ ನಿಜವಾದ ವಿಜಯ..
ಇನ್ನೂ ಅತ್ಯುತ್ತಮ ಅವಕಾಶಗಳು ದೊರೆಯಲಿ ನಿಮಗೆ ಕನ್ನಡದ ಹೆಮ್ಮೆಯ ಪುತ್ರ
ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯಲ್ಲೂ ಬಹಳ ದೊಡ್ಡದು ನಿಮ್ಮ ಪಾತ್ರ
ಬಹುಮುಖ ಪ್ರತಿಭೆಯ ಭಂಡಾರವಾದ ನಿಮಗೆ ನಿಮ್ಮಲ್ಲಿನ ಸರಳತೆಯೇ ನಿಮ್ಮ ಗೆಲುವಿನ ಶಸ್ತ್ರ ಚಿತ್ರರಂಗದಲ್ಲಿ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ನೀವು ಮುಂದೆಯೂ ಇದೇ ವ್ಯಕ್ತಿತ್ವದೊಂದಿಗೆ ಸಾಗಿ ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ ಕರುನಾಡಿನ ಸುಪುತ್ರ. ಅನುಪಮ ಬಿ ಜಿ
No comments:
Post a Comment