ನನ್ನೊಲವಿನ ಹೃದಯಕೆ ಶುಭಾಶಯ
ನನ್ನಯ ಪಾಲಿಗೆ ಇದು ಮಹತ್ವದ ಸುದಿನ...
ನಿನ್ನನ್ನು ನನ್ನ ಜೀವನಕ್ಕೆ ಕಾಣಿಕೆಯಾಗಿತ್ತ ದೇವರಿಗೊಂದು ನಮನ..
ನಿನ್ನ ಅಪಾರವಾದ ಪ್ರೇಮಕ್ಕೆ ಏನ ತಾನೇ ನೀಡಲಿ ನಾ ಬಹುಮಾನ...
ಇದೋ ನನ್ನ ಮನದಾಳದ ಹಾರೈಕೆ ನಿನಗೆ ನಲ್ಲ ,
ಜೀವನದ ಪ್ರತಿಯೊಂದು ಕ್ಷಣವೂ ನಿನಗಾಗಲಿ ಸವಿಯಾದ ಬೆಲ್ಲ...
ಕಷ್ಟ ಕಾರ್ಪಣ್ಯಗಳು ಸರಿಯಲಿ ದೂರ, ನಿನ್ನಿಂದ ನಲ್ಲ...
ಇಂದೇ ಮರೆಯಾಗಿ ಹೋಗಲಿ ನಿನ್ನ ಜೀವನದ ಕಹಿಯಾದ ಕ್ಷಣಗಳೆಲ್ಲ...
ನಿನ್ನ ಜೀವದ ಗೆಳತಿ ನಾ, ಸದಾ ಸಿದ್ದಳು , ಪಾಲುದಾರಿಕೆಗೆ , ನಿನ್ನ ನೋವು ನಲಿವುಗಳಲಿ....
ನೀನೆಂದೂ ಮುಳುಗದಿರು ದುಃಖದ ಮಡುವಿನಲಿ , ಆ ದುಗುಡದ ಕ್ಷಣಗಳೆಲ್ಲವೂ ನನಗಿರಲಿ...
ಕಗ್ಗತ್ತಲ ಅಂಧಕಾರ ಎಂದೂ ನಿನ್ನ ಆವರಿಸದಿರಲಿ ,ಅಂಧಕಾರವ ಬಡಿದೋಡಿಸಿ ಜೀವನದಿ ಸೆಣಸಾಡುವ ಶಕ್ತಿ ನಿನಗೆ ಸಿಗಲಿ
ನಿನ್ನ ಜೀವನದ ಬಂಡಿ ಸದಾ ಸಾಗಲಿ ಹೊನ್ನ ಬೆಳಕಲಿ.....
ನೀನೊಂದು ಪ್ರೀತಿ, ಪ್ರೇಮ ,ಸಹನೆಗಳ ಆಗರ...
ನಿನ್ನ ಜೀವನದ ಸಂಗಾತಿಯಾಗಿ ನಿಜಕ್ಕೂ ನನ್ನ ಬಾಳಾಯಿತು ಬಂಗಾರ...
ಇಂದಿನ ಶುಭಗಳಿಗೆಯಲ್ಲಿ , ನಿನಗೆ ಭಗವಂತನ ಆಶೀರ್ವಾದದ ಸುರಿಮಳೆಯಾಗಲಿ ಅಪಾರ...
ನಿನ್ನ ಜನುಮದಿನಕೆ ಇದೋ ನನ್ನ ಪುಟ್ಟ ಕವನದ ಕಾಣಿಕೆ ನಿನಗೆ, ನನ್ನ ಮನದ ಪಾಳೇಗಾರ.....
ಅನುಪಮ ಬಿ. ಜಿ. ಪ್ರಸಾದ್
No comments:
Post a Comment