ಜನುಮದಿನದ ಶುಭಾಶಯಗಳು ನನ್ನೊಲವೇ
ಜೀವನದ ಗೆಳೆಯಾ
ನನ್ನೊಲವಿನ 💕 ಹೃದಯಾ 💓
ಇದೋ ನಿನಗೆ ಹುಟ್ಟುಹಬ್ಬದ ಶುಭಾಶಯ
ನಗು ನಗುತ ನೂರುಕಾಲ ಬಾಳು ನನ್ನಿನಿಯಾ
ಜೀವನವು ಸದಾ ನಿನಗೆ ಉಣ ಬಡಿಸಲಿ ಬೆಲ್ಲದ ಸಿಹಿಯ
ಕಷ್ಟ ಕಾರ್ಪಣ್ಯಗಳು ದೂರಾಗಿ ಭಗವಂತ ನಿನ್ನಿಂದ ದೂರಸರಿಸಲಿ ನೋವಿನ ಕಹಿಯ ಸುಗಮವಾದ ಹಾದಿಯಲ್ಲಿ ಸಾಗಿ ಹಾರಿಸು ನೀ ವಿಜಯ ಪತಾಕೆಯ
ಇದೋ ನನ್ನ ಹಾರೈಕೆ , ನೆಮ್ಮದಿ ,ಸಂತೋಷಗಳು ಒಳಹೊಕ್ಕು ಬಂಗಾರ ಮಾಡಲಿ ನಿನ್ನ ಮನಸ್ಸಿನ ಮನೆಯ
ಅನುಪಮ ಬಿ ಜಿ
No comments:
Post a Comment