ಮುಂಜಾನೆ ಮಳೆ
kannadasobagu.blogspot.com
ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುರಿದ ಮುಂಜಾನೆಯ ಮಳೆತನ್ನ ಮರಗಿಡಗಳ ಸೊಂಪಾದ ಗರಿ ಬಿಚ್ಚಿ ನರ್ತಿಸಿದಳು ಇಳೆ
ಮಳೆ ನಿಂತಾಗ ಹಚ್ಚ ಹಸಿರಿನಿಂದ ಸಿಂಗಾರಗೊಂಡ ಇಳೆಗೆ ನವವಧುವಿನ ಕಳೆ
ಹಸಿರ ಸೊಬಗು ಕಂಡ ಪಕ್ಷಿಗಳು ಚಿಲಿಪಿಲಿಗುಟ್ಟಿ ಹರಿಸಿದವು ಕಲರವದ ಅಲೆ....
ಮಳೆಯಲ್ಲಿ ಮಿಂದೆದ್ದ ಭೂಮಿಗೆ ಅದಾಗಲೇ ಕಂಡಿತು ಸೂರ್ಯನ ಕಿರಣದ ಎಳೆ
ಕಿರಣಗಳು ಸೋಕಿದೊಡನೆ ಮೊಗ್ಗುಗಳೆಲ್ಲ ಹೂವಾಗಿ ಅರಳಿದವು ಒಮ್ಮೆಲೆ
ಹಸಿರು ಹಾಸಿನ ಮೇಲೆ ಹೊಳೆಯುವ ಮಳೆಹನಿಯ ಆಭರಣ ತೊಟ್ಟ ಪ್ರಕೃತಿ ನಿಜಕ್ಕೂ ಸೌಂದರ್ಯದ ಸೆಲೆ
ಅಬ್ಬಾ! ನಿಜಕ್ಕೂ ಅದ್ಭುತ! ಪ್ರಕೃತಿಯು ತನ್ನನ್ನು ತಾನು ಸಿಂಗರಿಸಿಕೊಳ್ಳುವ ಕಲೆ.
ಅನುಪಮ ಬಿ ಜಿ
No comments:
Post a Comment