ನನ್ನ ಜೀವದ ಜೀವವೇ , ಈ ದಿನ ನಿನಗೆ ಜನುಮದಿನ
ನಾ ಏನನ್ನು ತಾನೆ ನೀಡಲಿ ನಿನಗೆ ? ನನ್ನ ಹೃದಯದ ಯಜಮಾನ
ನೀನಿತ್ತ ಪ್ರೀತಿಯ ನನ್ನೊಳಗಿಟ್ಟು ಸದಾ ಮಾಡುವೆನು ಜೋಪಾನ
ಕಷ್ಟಗಳ ನಾ ನುಂಗಿ , ಅವೆಂದಿಗೂ ನಿನ್ನೆಡೆಗೆ ಸುಳಿಯದಂತೆ ಹಾಕುವೆನು ಕಡಿವಾಣ
ನನ್ನ ಮನದಾಳದ ಹಾರೈಕೆಯೇ ನಿನಗೆ ನನ್ನ ಉಡುಗೊರೆ
ಎಂದಿಗೂ ಬೇಯದಿರು ನೀ ಕಷ್ಟಗಳ ಕೆಂಡದಲಿ ನನ್ನ ದೊರೆ
ಸದಾ ನಿನ್ನ ಉನ್ನತಿಗಾಗಿಯೇ ನಾ ಹೋಗುವೆ ಆ ದೇವರ ಮೊರೆ
ಬೇಡುವೆನು ನಾನು , ಸದಾ ನಿನ್ನ ಜೀವನದೊಳು ಹರಿಯುತಿರಲೆಂದು ಕ್ಷೀರ ಧಾರೆ
ಯಾವಾಗಲೂ ಬಾಳಾಗಿರಲಿ , ನಿನಗೆ ನೆಮ್ಮದಿಯ ತಾಣ
ಯಶಸ್ಸಿನ ಹಾದಿಯೆಡೆಗೆ ಸಾಗುತಿರಲಿ ಈ ನಿನ್ನ ಪಯಣ
ಶೋಧನೆ , ವೇದನೆಗಳು ಎಂದಿಗೂ ಬಂದೆರಗದಿರಲಿ ನಿನಗೆ ನನ್ನೊಲುಮೆಯ ಜಾಣ
ನಿನ್ನ ಹುಟ್ಟುಹಬ್ಬಕ್ಕೆ ಬಳುವಳಿ ಇಗೋ , ಈ ನನ್ನ ಪುಟ್ಟ ಕವನ !
-ಅನುಪಮ ಬಿ ಜಿ
No comments:
Post a Comment