ಅರಿತು ಬೆರೆತ ಮನಗಳಿಗೆ ದಿನಾಲೂ ಪ್ರೇಮಿಗಳ ದಿನ
ನಿಷ್ಕಲ್ಮಶ ಪ್ರೀತಿಗೆ ಯಾವುದಾದರೇನು ದಿನ?
ವರ್ಷಕ್ಕೊಮ್ಮೆ ಪ್ರೇಮಿಗಳ ದಿನ, ಇಂದು ದಿನಕ್ಕೊಂದು ದುರಂತ ಪ್ರೇಮ ಕಥನ
ಕೆಲವರಿಂದ ಆಗುತಿಹುದು 'ಪ್ರೀತಿಯ' ಬಹುದೊಡ್ಡ ಪತನ
ಪ್ರೇಮಿಗಳ ದಿನದಂದು ನಿವೇದಿಸಿಕೊಳ್ಳುವರು ತಮ್ಮ ಪ್ರೇಮವ
ಆದರೆ, ಇಂದು ಹಲವರರಿಯರು ಒಲವಿನ ನಿಜವಾದ ಅರ್ಥವ
ಅದೆಷ್ಟೋ ಮಂದಿ ಆರಾಧಿಸುವರು ಕಣ್ಣಿಗೆ ಕಾಣುವ ಅಂದವ
ಆದರೆ ಅರಿಯಲೆತ್ನಿಸರು ಪ್ರೇಮಿಯ ಅಂತರಂಗವ
ಕೆಲವರು ತೋರಿಕೆಯ ಪ್ರೀತಿಗಷ್ಟೇ ಆಚರಿಸುತಿಹರು ಪ್ರೇಮಿಗಳ ದಿನ
ಮೋಜು, ಮಸ್ತಿಯೊಡನೆ ಮಾಡುತಿಹರು ಟೊಳ್ಳು ಪ್ರೀತಿಯ ವೈಭವೀಕರಣ
ಅಂತರಂಗದ ಅಂದವನರಿತವರು ಪ್ರೀತಿಸುವರು ಪ್ರತಿಕ್ಷಣ
ಮನಸ್ಸು ಮನಸ್ಸುಗಳ ಮಿಲನಕೆ ಪ್ರತೀ ಗಳಿಗೆಯೂ ಶುಭ ಶಕುನ.
-ಅನುಪಮ ಬಿ ಜಿ
No comments:
Post a Comment