ದಿನಾಲೂ ಮನೆಯ ಶುಚಿಗೊಳಿಸಿ ದೀಪವ ಹಚ್ಚುವರು
ತನ್ನ ಮನಸ್ಸಿನಾಳದೊಳುದುಗಿರುವ ಕೊಳೆಯ ಬಗ್ಗೆ ಅವರರಿಯರು
ಎಲ್ಲೋ ದೂರದ ದೇವಸ್ಥಾನಗಳಿಗೆ ಬಹಳ ಶ್ರಮಪಟ್ಟು ಹೋಗುವರು
ಕಣ್ಮುಂದೆಯೇ ಇರುವ ಜೀವಂತ ದೇವರುಗಳಿಗೆ ಕೈ ಜೋಡಿಸಿ ಮುಗಿಯರು
ತ್ಯಾಗಮೂರ್ತಿಗಳಾದ ಹೆತ್ತವರಿಗೆ ಮೊದಲು ನೀವು ನಮಿಸಿ
ಹಲವರು ಅಗೌರವ ತೋರುತಿಹರು ಮಾತಾ-ಪಿತರಿಗೆ , ವೃದ್ಧಾಶ್ರಮಕ್ಕೆ ಸೇರಿಸಿ
ಪೋಷಕರು ಮಕ್ಕಳನ್ನು ಸಲಹುವರು ಕಣ್ಣಿನ ರೆಪ್ಪೆಯಂತೆ ಪೋಷಿಸಿ
ಅವರನ್ನು ಕಡೆಗಣಿಸಿ , ಮಕ್ಕಳಿಂದು ಹೊರಟರು ತಮ್ಮದೇ ಹಾದಿ ಅರಸಿ
ಮಕ್ಕಳೆಂದಿಗೂ ಹೊರೆಯೆನಿಸಲಿಲ್ಲ ಜನ್ಮ ಕೊಟ್ಟ ಆ ದೈವಗಳಿಗೆ
ಮಕ್ಕಳಿಗೀಗ ಸಮಯವಿಲ್ಲ ಅರೆಗಳಿಗೆ ಪ್ರೀತಿ ಹಂಚಲು ಜನುಮದಾತರಿಗೆ
ಅದೆಷ್ಟೋ ಕಾಲ ಮೀಸಲಿಡುವಿರಿ ದೇವರ ಹೋಮ ಹವನಗಳಿಗೆ
ಕೊಂಚ ಸಮಯ ನೀಡಿರಿ ಕಣ್ಮುಂದಿನ ದೇವರುಗಳಿಗೆ , ಅದೇ ಮನೋಲ್ಲಾಸ ಆ ಸವೆದ ಜೀವಿಗಳಿಗೆ.
- ಅನುಪಮ .ಬಿ .ಜಿ ಪ್ರಸಾದ್
No comments:
Post a Comment