ಸಾಧನೆಯ ಹಾದಿ ಬಹಳ ಸುಲಭದ್ದಲ್ಲ
ಅದರ ತುದಿಯನ್ನು ಮುಟ್ಟಲು ಆಲಸಿಗಳಿಂದ ಎಂದಿಗೂ ಸಾಧ್ಯವಿಲ್ಲ
ಯಾವುದೇ ಸಾಧನೆ ಒಂದೇ ದಿನದಲ್ಲಿ ಆದದ್ದಲ್ಲ
ಅದಕ್ಕಾಗಿ ಶ್ರಮಿಸಿರುವರು ಸಾಧಕರು , ಅದೆಷ್ಟೋ ದಿನಗಳು , ವರುಷಗಳೆಲ್ಲ
ಸಾಧಿಸಬೇಕೆಂಬವನಿಗೆ , ಹಗಲು-ಇರುಳುಗಳ ವ್ಯತ್ಯಾಸವಿಲ್ಲ
ಕಲ್ಲು , ಮುಳ್ಳುಗಳ ಹಾದಿಯ ಬಗೆಗೆ ಅಂಜಿಕೆಯಿಲ್ಲ
ಯಾವುದೇ ಸ್ಥಾನ ಸುಲಭದಲ್ಲಿ ದಕ್ಕುವುದಿಲ್ಲ
ಅದಕ್ಕಾಗಿ ಹಾಕು , ನಿನ್ನ ಪ್ರಾಮಾಣಿಕತೆಯ ಪರಿಶ್ರಮವನ್ನೆಲ್ಲ
ಸಾಧನೆಯ ಮಜಲುಗಳು ಬಹಳ ಕಡಿದಾದವು
ಅದನ್ನೇರುವಾಗ , ಮಜಲುಗಳೆಡೆಗಿರಲಿ ನಿಮ್ಮ ಸಂಪೂರ್ಣ ಗಮನವು
ನಿನ್ನಲ್ಲಿರಲಿ , ಅದೆಂತಹದೇ ಬಿರುಗಾಳಿಗೂ ಬೆಚ್ಚದೆ ಮುನ್ನುಗ್ಗುವ ಸ್ಥೈರ್ಯವು
ಸದಾ ನಂಬು , ನೋವಿನ ಸರಪಳಿಗಳೇ ಮುಂದೊಮ್ಮೆ ನಿನಗೆ ಗೆಲುವಿನ ಹಾರವು.
- ಅನುಪಮ ಬಿ ಜಿ
No comments:
Post a Comment