Sunday, February 17, 2019

                    ವೀರ ಯೋಧರಿಗೆ ನಮನ 
       
         ಇದೋ , ನಿಮಗಿದು  ನಮನ,   ನಿಮಗಿದು ನಮನ
         ದೇಶದ  ಹಿತಕ್ಕಾಗಿ ಮುಡಿಪಿಟ್ಟಿರಿ ನಿಮ್ಮ ಇಡೀ  ಜೀವನ
         ಸಾರ್ಥಕವಾಯಿತು  ಭಾರತಾಂಬೆಯ  ಮಡಿಲಲ್ಲಿ  ನಿಮ್ಮ  ಜನನ
         ತ್ಯಾಗಮಯಿಗಳು ನೀವು , ನಮ್ಮ ಉಳಿವಿಗಾಗಿ  ಮಾಡಿದಿರಿ ನಿಮ್ಮ ಬಲಿದಾನ ....


         ಭಾರತಾಂಬೆಯ  ಹೆಮ್ಮೆಯ  ಸುಪುತ್ರರು  ನೀವು
         ನಮ್ಮನ್ನೆಲ್ಲ ಹೆತ್ತಮ್ಮನಂತೆ ರಕ್ಷಿಸಿ  ಹುತಾತ್ಮರಾದ  ಶೂರರು ನೀವು
         ನಿಮ್ಮ ನಿದ್ರೆ ತೊರೆದು,  ನಮಗೆ  ನಿಶ್ಚಿಂತೆ  ನಿದ್ರೆಯ  ಭಿಕ್ಷೆಯನಿತ್ತ  ಮಹಾ ಯೋಧರು ನೀವು
         ನಿಮ್ಮ ಸುಖವನ್ನೆಲ್ಲಾ ಕೊಂದುಕೊಂಡು,  ನಮ್ಮ ಸುಖ ಸಂತೋಷಕ್ಕಾಗಿ  ನಿಮ್ಮನ್ನು ಪಣಕ್ಕಿಟ್ಟ  ನಿಸ್ವಾರ್ಥಿಗಳು ನೀವು ............

           
         ನಮ್ಮ  ಜೀವನಕ್ಕೆ  ಆಕಾರಕೊಟ್ಟ  ನಿಮ್ಮ  ದೇಹವನ್ನು  ಶತ್ರುಗಳು  ಛಿದ್ರ  ಛಿದ್ರಗೊಳಿಸಿದರು.
         ನಮ್ಮ ದೇಶದ  ಪ್ರತಿಬಿಂಬವಾದ  ನಿಮ್ಮ ಬಿಂಬವ ಕೊನೆಯಬಾರಿ  ನಿಮ್ಮ ಮನೆಯವರೇ ನೋಡದಂತೆ
                                                      ಮಾಡಿದರು.
     ಆ  ದುಷ್ಟರು  ಭಾರತಾಂಬೆಯ  ಪಾದಗಳಿಗೆ  ನಿಮ್ಮ  ನೆತ್ತರಿನ  ಹೊಳೆಯನ್ನೇ   ಹರಿಸಿದರು.
   ನಿಮ್ಮ ದೇಹವನ್ನು  ಮಾಂಸದ ತುಂಡುಗಳಾಗಿಸಿದವರ ವಿರುದ್ಧ ಪ್ರತೀಕಾರ   ತೆಗೆದುಕೊಂಡೇ   ತೀರುವರು
          ನಿಮ್ಮ ಸ್ನೇಹಿತರಾದ ನಮ್ಮ ಭಾರತ ಯೋಧರು .......



        ನಿಮ್ಮಂತಹ ವೀರಪುತ್ರರನ್ನು  ಹೆತ್ತು ,  ಭಾರತಾಂಬೆಯ  ಸೇವೆಗೆ ಅರ್ಪಿಸಿದ ಆ ಹೆತ್ತ ಕರುಳುಗಳಿಗೆ
                                                         ನನ್ನ ನಮನ.
        ತಮ್ಮ ಪ್ರೀತಿಯನ್ನೆಲ್ಲ ಮನಸೊಳಗೆ ಅದುಮಿಟ್ಟು ದೇಶ ಸೇವೆಗೆ  ಕಳುಹಿಸಿಕೊಟ್ಟ ಪ್ರತಿಯೊಬ್ಬ ಯೋಧನ ಬಾಳಸಂಗಾತಿಗೆ ಮನದಾಳದ  ನಮನ.
        ಇಡೀ ದೇಶ ಅಂದು ಪ್ರೇಮದ ಅಮಲಿನಲ್ಲಿ ,  ನೀವಿದ್ದಿರಿ ಅಂದು ರಕ್ತದ ಮಡುವಿನಲ್ಲಿ ನಿಮ್ಮೀ  ತ್ಯಾಗಕ್ಕೆ
                                                          ನನ್ನ ನಮನ.
        ನಿಮ್ಮ ದೇಶ ಸೇವೆಗೆ , ನನ್ನ ವಂದನಾರ್ಪಣೆ  ಸಾಸಿವೆಕಾಳಷ್ಟೂ ಅಲ್ಲ ,ಆದರೂ ಸಮರ್ಪಿಸಿರುವೆ
                  ನಿಮಗಾಗಿ ಇದೋ ಈ ಪುಟ್ಟ ಕವನ ............                                                                                                                             

                                                                                                      ಅನುಪಮ ಬಿ ಜಿ
       
          

Tuesday, February 5, 2019

Kannada Sobagu (ಕನ್ನಡ ಸೊಬಗು):                                     ನನ್ನೊಲವಿನ ಹೃದಯ...

Kannada Sobagu (Kannada elegance): Heart of myola ...: My heart's heart is greeting my heart's heart is the birthday of you ... This is my part ...

                                    ನನ್ನೊಲವಿನ ಹೃದಯಕೆ ಶುಭಾಶಯ



   ನನ್ನೊಲವಿನ ಹೃದಯವೇ ನಿನಗಿಂದು ಹುಟ್ಟು ಹಬ್ಬದ ಶುಭದಿನ...

   ನನ್ನಯ ಪಾಲಿಗೆ ಇದು ಮಹತ್ವದ ಸುದಿನ...

   ನಿನ್ನನ್ನು ನನ್ನ ಜೀವನಕ್ಕೆ ಕಾಣಿಕೆಯಾಗಿತ್ತ ದೇವರಿಗೊಂದು ನಮನ..

   ನಿನ್ನ ಅಪಾರವಾದ ಪ್ರೇಮಕ್ಕೆ ಏನ ತಾನೇ ನೀಡಲಿ ನಾ ಬಹುಮಾನ...




   ಇದೋ ನನ್ನ ಮನದಾಳದ ಹಾರೈಕೆ ನಿನಗೆ ನಲ್ಲ ,

   ಜೀವನದ ಪ್ರತಿಯೊಂದು ಕ್ಷಣವೂ ನಿನಗಾಗಲಿ ಸವಿಯಾದ ಬೆಲ್ಲ...

   ಕಷ್ಟ ಕಾರ್ಪಣ್ಯಗಳು ಸರಿಯಲಿ ದೂರ, ನಿನ್ನಿಂದ  ನಲ್ಲ...

   ಇಂದೇ ಮರೆಯಾಗಿ ಹೋಗಲಿ ನಿನ್ನ ಜೀವನದ  ಕಹಿಯಾದ  ಕ್ಷಣಗಳೆಲ್ಲ...




   ನಿನ್ನ ಜೀವದ ಗೆಳತಿ ನಾ, ಸದಾ ಸಿದ್ದಳು , ಪಾಲುದಾರಿಕೆಗೆ , ನಿನ್ನ ನೋವು ನಲಿವುಗಳಲಿ....

   ನೀನೆಂದೂ ಮುಳುಗದಿರು ದುಃಖದ ಮಡುವಿನಲಿ , ಆ ದುಗುಡದ ಕ್ಷಣಗಳೆಲ್ಲವೂ ನನಗಿರಲಿ...

   ಕಗ್ಗತ್ತಲ ಅಂಧಕಾರ ಎಂದೂ ನಿನ್ನ ಆವರಿಸದಿರಲಿ ,ಅಂಧಕಾರವ ಬಡಿದೋಡಿಸಿ ಜೀವನದಿ ಸೆಣಸಾಡುವ ಶಕ್ತಿ ನಿನಗೆ ಸಿಗಲಿ
   
   ನಿನ್ನ ಜೀವನದ ಬಂಡಿ ಸದಾ ಸಾಗಲಿ ಹೊನ್ನ ಬೆಳಕಲಿ.....





   ನೀನೊಂದು ಪ್ರೀತಿ,  ಪ್ರೇಮ ,ಸಹನೆಗಳ  ಆಗರ...

   ನಿನ್ನ ಜೀವನದ ಸಂಗಾತಿಯಾಗಿ ನಿಜಕ್ಕೂ ನನ್ನ ಬಾಳಾಯಿತು ಬಂಗಾರ...

   ಇಂದಿನ ಶುಭಗಳಿಗೆಯಲ್ಲಿ , ನಿನಗೆ ಭಗವಂತನ ಆಶೀರ್ವಾದದ ಸುರಿಮಳೆಯಾಗಲಿ ಅಪಾರ...

   ನಿನ್ನ ಜನುಮದಿನಕೆ ಇದೋ ನನ್ನ ಪುಟ್ಟ ಕವನದ ಕಾಣಿಕೆ ನಿನಗೆ,  ನನ್ನ ಮನದ ಪಾಳೇಗಾರ.....


                                                                                         ಅನುಪಮ ಬಿ. ಜಿ. ಪ್ರಸಾದ್

#guru #teacher #sculptor #knowledge