Friday, September 13, 2019

                                            ಜೀವನದ  ಗೌಪ್ಯತೆ 


 ಮೊದಲೇ  ತಿಳಿದವನಾರೂ  ಇಲ್ಲ ತನ್ನ  ಜೀವನವ 
ನಾ  ತಿಳಿದಿಹೆ ಎಲ್ಲವನ್ನು ಎಂದು ನುಡಿವರು ನೋಡಿ ಜ್ಯೋತಿಷ್ಯವ 
ನಿನ್ನ ಜ್ಯೋತಿಷ್ಯ ಕೆಟ್ಟದಿದ್ದರೂ  ತಲೆಕೆಡಿಸಿಕೊಳ್ಳದೆ ,ಮುನ್ನುಗು  ನಿನ್ನ ಗುರಿಯತ್ತ ನೀ ಬಿಡದೆ ಛಲವ 
ಯಾರೂ ಕೆಟ್ಟವರಿಲ್ಲ ನಂಬಿ , ತಾನು ಶ್ರದ್ದೆಯಿಂದ ಮಾಡುವ ಕಾಯಕವ


ಜೀವನದ ಪ್ರತೀ ಹಂತದಲ್ಲೂ  ಅಡಗಿದೆ ಒಂದಿಲ್ಲೊಂದು  ಗೌಪ್ಯ 
ಪ್ರತಿಯೊಬ್ಬರಿಗೂ  ಜೀವನದಿ  ಅವಕಾಶಗಳು ಲಭ್ಯ 
ಅವುಗಳ ಸರಿಯಾದ ಸಮಯಕ್ಕೆ ಗುರುತಿಸಿ ಶ್ರಮಪಟ್ಟಾಗ ನೀನಾಗುವೆ ಯೋಗ್ಯ 
ನಿನ್ನ ಗುರಿಯತ್ತ ತಲುಪಲು ತಾಳ್ಮೆ ಹಾಗೂ ಪರಿಶ್ರಮ ಅತೀ ಮುಖ್ಯ 


ಜೀವನದ ಗೌಪ್ಯತೆ ಒಮ್ಮೊಮ್ಮೆ ಸಂತಸದ ಹೂಮಳೆಗರೆಯಬಹುದು 
ಇದೇ ಜೀವನದ ಗೌಪ್ಯತೆ ಬರಸಿಡಿಲಿನಂತಹ ದುಃಖವನ್ನು ತಂದೊಯ್ಯಬಹುದು 
ಪ್ರೀತಿ ,ಶ್ರೀಮಂತಿಕೆ ಹಾಗೂ ಗೆಲುವಿನ ಸವಿಜೇನ ಉಣಿಸಬಹುದು 
ಹತಾಶೆ ,ಸೋಲು ಹಾಗೂ ಕಷ್ಟಗಳ ಹಾಲಾಹಲ ಕುಡಿಸಬಹುದು 


ಜೀವನದ ಹಾದಿಯಲ್ಲಿ ಪಯಣಿಗರು ನಾವು 
ಎಲ್ಲರಿಗೂ ಇದ್ದೇ ಇರುತ್ತದೆ ಸುಖ-ದುಃಖ  ಸಾವು ನೋವು 
ಶ್ರೀಮಂತಿಕೆಗೆ ಹಿಗ್ಗದೆ ಬಡತನಕ್ಕೆ  ಕುಗ್ಗದೆ ಸಾಗಬೇಕು ನಾವು 
ಇವೆಲ್ಲದರ ಮಿಶ್ರಣ ಸವಿದಾಗಲೇ ತಾನೇ ನಮಗೆ  ಅರಿವಾಗುವುದು ಜೀವನದ ಸ್ವಾರಸ್ಯವು                                                                                    
                                                                                                       ಅನುಪಮ ಬಿ ಜಿ  

#guru #teacher #sculptor #knowledge