ಮನಸು ಮನಸುಗಳ ಮಿಲನಕೆ ಆಡಂಭರದ ಮಂಟಪವೇಕೆ ?
ನವ ದಾಂಪತ್ಯದ ಹೊಸ್ತಿಲಿನ ಒಳಹೊಕ್ಕಲು ಲಕ್ಷಗಳ ವ್ಯಯಿಸಲೇಬೇಕೇ ?
ಈ ಆಡಂಭರವು ಸಮಾಜಕ್ಕೆ ಶಾಪವಾಗಿ ಅಂಟ್ಟಿದ್ದು ಯಾಕೆ ?
ಆಡಂಭರದ ಮದುವೆ ಉಳ್ಳವರ ಸಿರಿತನದ ತೋರ್ಪಡಿಕೆ
ಬಡವನಿಗೆ ಸಮಾಜದ ಕಟ್ಟುಪಾಡಿನ ಅಂಜಿಕೆ
ಬಡವನಿಗೆ ಸಮಾಜದ ಕಟ್ಟುಪಾಡಿನ ಅಂಜಿಕೆ
ಕಡಿಮೆ ವೆಚ್ಚದ ಮದುವೆ ಮಾಡಿದಲ್ಲಿ ಬಂಧುಬಳಗ ಏನೆಂಬರೋ ಎಂಬ ಹೆದರಿಕೆ
ಆಡಂಭರದ ಮದುವೆ ಕೇವಲ ಇತರರ ಮೆಚ್ಚುಗೆಗಾಗಿ ,
ಪ್ರೀತಿಗೆಂದೂ ಆಡಂಭರವಿಲ್ಲ , ಮದುವೆಯ ಹೂಮಾಲೆ ಬಂಗಾರದ ಬದುಕಿಗಾಗಿ
ಅದೆಂದಿಗೂ ಸೀಮಿತವಾಗದಿರಲಿ ಮೈಮೇಲಿನ ಬಂಗಾರಕ್ಕಾಗಿ
ತನ್ನ ಪ್ರೀತಿಯನ್ನು ನಿರಾಡಂಭರವಾಗಿ ಇದ್ದಂತೆಯೇ ಒಪ್ಪಿ , ಬರಮಾಡಿಕೊಳ್ಳುವವನೇ ಸಿರಿವಂತ
ಆಡಂಭರದ ಬೆನ್ನತ್ತಿದವನಿಗೆ ಎಂದಿಗೂ ಸವಿಯಲು ಸಿಗದು ಬಾಳಿನ ಸಿಹಿ ಅಮೃತ
ಆಡಂಭರದ ಬೆನ್ನತ್ತಿದವನಿಗೆ ಎಂದಿಗೂ ಸವಿಯಲು ಸಿಗದು ಬಾಳಿನ ಸಿಹಿ ಅಮೃತ
ವೈಭವದ ಸುಳಿಯಲ್ಲಿ ಸಿಲುಕಿಹೋಗದಿರಲಿ ದಾಂಪತ್ಯದ ಇಂಪಾದ ಸಂಗೀತ
- ಅನುಪಮ ಬಿ ಜಿ